ಮೊಬೈಲ್ ರೋಮಿಂಗ್ ದರ ಇಳಿಕೆ

 ಮೊಬೈಲ್ ಬಳಕೆದಾರರಿಗೊಂದು ಸಿಹಿ ಸುದ್ದಿ! ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಸೋಮವಾರ ಮೊಬೈಲ್ ಕರೆ ಹಾಗೂ ಎಸ್‌ಎಂಎಸ್‌ಗಳ ಮೇಲಿನ ರೋಮಿಂಗ್ ದರವನ್ನು ಕಡಿತಗೊಳಿಸಿದೆ. ಈ ನೂತನ ದರ ಜು.1ರಿಂದ ಜಾರಿಗೆ ಬರಲಿದೆ.
ಇದಲ್ಲದೆ ಎಸ್‌ಟಿವಿ(ಸ್ಪೆಷಲ್ ಟ್ಯಾರಿಫ್ ವೋಚರ್ಸ್) ಮತ್ತು ಕಾಂಬೋ ವೊಚರ್ಸ್ ಎನ್ನುವ ಎರಡು ರೀತಿಯ ಯೋಜನೆಗಳನ್ನು ಗ್ರಾಹಕರಿಗೆ ನೀಡುವಂತೆ ಟ್ರಾಯ್ ಮೊಬೈಲ್ ಸೇವಾದಾರರಿಗೆ ಸೂಚಿಸಿದೆ. ಈ ಷರತ್ತುಬದ್ಧ ಮುಕ್ತ ರೋಮಿಂಗ್ ಯೋಜನೆಗಳು ಮೊಬೈಲ್ ರೋಮಿಂಗ್ ದರವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ನೆರವು ನೀಡಲಿದೆ.
ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಳದಿಂದಾಗಿ ರಾಷ್ಟ್ರೀಯ ರೋಮಿಂಗ್‌ಗೆ ಸಂಬಂಧಿಸಿದ ವೆಚ್ಚ ಇಳಿಕೆಯಾಗಿದೆ. ಆದರೆ, ರೋಮಿಂಗ್‌ಗಾಗಿ ಸದ್ಯ ಮೊಬೈಲ್ ಸೇವಾದಾರರು ಒಂದಷ್ಟು ವೆಚ್ಚ ಮಾಡಲೇ ಬೇಕಿದೆ. ಹಾಗಾಗಿ ಸದ್ಯದ ಸ್ಥಿತಿಯಲ್ಲಿ ಮುಕ್ತ ರೋಮಿಂಗ್ ಸೌಲಭ್ಯ ಕಲ್ಪಿಸುವುದು ಕಾರ್ಯಸಾಧುವಲ್ಲ. ಒಂದು ವೇಳೆ ಮುಕ್ತ ರೋಮಿಂಗ್ ಸೇವೆ ಜಾರಿಗೊಳಿಸಿದರೆ ಆಗುವ ನಷ್ಟವನ್ನು ಮೊಬೈಲ್ ಸೇವಾದಾರರು ಗ್ರಾಹಕರ ಮೇಲೆ ಹೇರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಟ್ರಾಯ್ ಸದ್ಯ ದರ ಕಡಿತಗೊಳಿಸುವ ನಿರ್ಧಾರವನ್ನಷ್ಟೇ ಪ್ರಕಟಿಸಿದೆ. ಆದರೆ, ಸದ್ಯಕ್ಕೆ ರೋಮಿಂಗ್ ಮುಕ್ತ ಸೇವೆ ಜಾರಿಗೊಳಿಸುವುದಿಲ್ಲ ಎಂದೂ ಟ್ರಾಯ್ ಹೇಳಿದೆ.
ನೂತನ ದರ: 2007ರಲ್ಲಿ ಟ್ರಾಯ್ ಸ್ಥಳೀಯ ರೋಮಿಂಗ್ ಕರೆಗಳಿಗೆ ಪ್ರತಿ ನಿಮಿಷಕ್ಕೆ 1.40, ಎಸ್‌ಟಿಡಿ ಕರೆಗಳಿಗೆ 2.40 ಆಗಿ ನಿಗದಿ ಮಾಡಿತ್ತು. ಆದರೆ, ಈಗ ಸ್ಥಳೀಯ ಕರೆಗಳಿಗೆ 1 ಮತ್ತು ಎಸ್‌ಟಿಡಿ ಕರೆಗಳಿಗೆ 1.50ಕ್ಕೆ ಇಳಿಸಿದೆ. ಅದೇ ರೀತಿ ರೋಮಿಂಗ್‌ನಲ್ಲಿದ್ದಾಗ ಒಳಬರುವ ಕರೆಯ ದರ ನಿಮಿಷಕ್ಕೆ 1.75ರಿಂದ 75 ಪೈಸೆಗೆ ಇಳಿಯಲಿದೆ.
ಎಸ್‌ಎಂಎಸ್
ರೋಮಿಂಗ್‌ನಲ್ಲಿ ಇದ್ದಾಗ ಹೊರಹೋಗುವ ಸ್ಥಳೀಯ ಎಸ್‌ಎಂಎಸ್‌ಗಳಿಗೆ 1 ಮತ್ತು ಹೊರಹೋಗುವ ಎಸ್‌ಎಂಎಸ್‌ಗಳಿಗೆ 1.50 ದರ ನಿಗದಿಪಡಿಸಲಾಗಿದೆ. ಆದರೆ, ಒಳಬರುವ ಎಸ್‌ಎಂಎಸ್‌ಗಳು ಶುಲ್ಕಮುಕ್ತವಾಗಿರಲಿವೆ
.

Comments

Popular posts from this blog

ಪ್ರಧಾನಿ ಮೋದಿಜೀ ಪ್ರಣಬ್ ಮುಖರ್ಜಿಯವರಿಗೆ ಬರೆದ ಪತ್ರ