ನಮ್ಮ ಪ್ರಣಾಳಿಕೆ... ಇಂದು ನಡೆದ ಸಮಾರಂಭದಲ್ಲಿ ಬಿಜೆಪಿ ಮುಖಂಡ ಮುರಳಿ ಮನೋಹರ ಜೋಷಿಯವರು ಪ್ರಣಾಳಿಕೆಯ ವಿವರವನ್ನ ಓದಿದ್ದಾರೆ. ಈ ಪ್ರಣಾಳಿಕೆಯ ಮುಖ್ಯಾಂಶಗಳು ಇಲ್ಲಿವೆ.. * ದೇಶದ ಪ್ರತಿಯೊಬ್ಬರಿಗೂ ಒಂದೇ ಕಾನೂನು; ಸಮಾನ ನಾಗರಿಕ ಸಂಹಿತೆ ಜಾರಿ * ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ * ಅತ್ಯಾಧುನಿಕ ಮೂಲಭೂತ ಸೌಲಭ್ಯ * ಎಲ್ಲಾ ಮನೆ, ಕೃಷಿಭೂಮಿ ಮತ್ತು ಕಾರ್ಖಾನೆಗಳಿಗೆ ನೀರು ಪೂರೈಕೆ * ಭಯೋತ್ಪಾದನೆ, ಉಗ್ರವಾದ ಮತ್ತು ಅಪರಾಧ ಕೃತ್ಯಗಳ ವಿರುದ್ಧ ತೀರಾ ಕಟ್ಟುನಿಟ್ಟಿನ ಕ್ರಮ * ಬೆಲೆ ಹೆಚ್ಚಳ ಸಮಸ್ಯೆಯ ನಿಗ್ರಹ * ಉದ್ಯೋಗ ಸೃಷ್ಟಿ ಹಾಗೂ ಉದ್ಯಮಶೀಲತೆಗೆ ಉತ್ತೇಜನ * ಭ್ರಷ್ಟಾಚಾರ ವಿರುದ್ಧ ಹೊಸ ಕಾಯ್ದೆ * ವಿದೇಶಗಳಿಂದ ಭಾರತೀಯರ ಕಪ್ಪು ಹಣ ಹಿಂದಕ್ಕೆ * ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ ಸುಧಾರಣೆ * ರಾಜ್ಯಗಳಿಗೆ ಹೆಚ್ಚಿನ ಅಧಿಕಾರ * ಪಾರದರ್ಶಕ ಮತ್ತು ಪರಿಣಾಮಕಾರಿ ಆಡಳಿತ * ಇ-ಆಡಳಿತಕ್ಕೆ ಆದ್ಯತೆ * ನ್ಯಾಯಾಂಗ, ಪೊಲೀಸ್, ಚುನಾವಣಾ ಸುಧಾರಣೆ * ಬಡವರ ಮತ್ತು ಶೋಷಿತರ ಉದ್ಧಾರ * ಬಡವರು ಮತ್ತು ಸಿರಿವಂತರ ನಡುವಿನ ಅಂತರ ತಗ್ಗಿಸುವುದು * ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ಮತ್ತಿತರ ದುರ್ಬಲ ವರ್ಗದವರಿಗೆ ಹೆಚ್ಚಿನ ಬಲ ಮತ್ತು ಸಾಮಾಜಿಕ ನ್ಯಾಯ * ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ * ಗ್ರಾಮೀಣ ಭಾಗಕ್ಕೆ ಹೆಚ್ಚಿನ ಆದ್ಯತೆ * ದೇಶದ ಭವಿಷ್ಯವಾದ ಮಕ್ಕಳ ಮೇಲೆ ಹೆಚ್ಚಿನ ಗಮನ * ಹಿರಿಯ ನಾಗರಿಕರಿಗೆ ಭದ್ರತೆ *...
ಮೊಬೈಲ್ ಬಳಕೆದಾರರಿಗೊಂದು ಸಿಹಿ ಸುದ್ದಿ! ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಸೋಮವಾರ ಮೊಬೈಲ್ ಕರೆ ಹಾಗೂ ಎಸ್ಎಂಎಸ್ಗಳ ಮೇಲಿನ ರೋಮಿಂಗ್ ದರವನ್ನು ಕಡಿತಗೊಳಿಸಿದೆ. ಈ ನೂತನ ದರ ಜು.1ರಿಂದ ಜಾರಿಗೆ ಬರಲಿದೆ. ಇದಲ್ಲದೆ ಎಸ್ಟಿವಿ(ಸ್ಪೆಷಲ್ ಟ್ಯಾರಿಫ್ ವೋಚರ್ಸ್) ಮತ್ತು ಕಾಂಬೋ ವೊಚರ್ಸ್ ಎನ್ನುವ ಎರಡು ರೀತಿಯ ಯೋಜನೆಗಳನ್ನು ಗ್ರಾಹಕರಿಗೆ ನೀಡುವಂತೆ ಟ್ರಾಯ್ ಮೊಬೈಲ್ ಸೇವಾದಾರರಿಗೆ ಸೂಚಿಸಿದೆ. ಈ ಷರತ್ತುಬದ್ಧ ಮುಕ್ತ ರೋಮಿಂಗ್ ಯೋಜನೆಗಳು ಮೊಬೈಲ್ ರೋಮಿಂಗ್ ದರವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ನೆರವು ನೀಡಲಿದೆ. ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಳದಿಂದಾಗಿ ರಾಷ್ಟ್ರೀಯ ರೋಮಿಂಗ್ಗೆ ಸಂಬಂಧಿಸಿದ ವೆಚ್ಚ ಇಳಿಕೆಯಾಗಿದೆ. ಆದರೆ, ರೋಮಿಂಗ್ಗಾಗಿ ಸದ್ಯ ಮೊಬೈಲ್ ಸೇವಾದಾರರು ಒಂದಷ್ಟು ವೆಚ್ಚ ಮಾಡಲೇ ಬೇಕಿದೆ. ಹಾಗಾಗಿ ಸದ್ಯದ ಸ್ಥಿತಿಯಲ್ಲಿ ಮುಕ್ತ ರೋಮಿಂಗ್ ಸೌಲಭ್ಯ ಕಲ್ಪಿಸುವುದು ಕಾರ್ಯಸಾಧುವಲ್ಲ. ಒಂದು ವೇಳೆ ಮುಕ್ತ ರೋಮಿಂಗ್ ಸೇವೆ ಜಾರಿಗೊಳಿಸಿದರೆ ಆಗುವ ನಷ್ಟವನ್ನು ಮೊಬೈಲ್ ಸೇವಾದಾರರು ಗ್ರಾಹಕರ ಮೇಲೆ ಹೇರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಟ್ರಾಯ್ ಸದ್ಯ ದರ ಕಡಿತಗೊಳಿಸುವ ನಿರ್ಧಾರವನ್ನಷ್ಟೇ ಪ್ರಕಟಿಸಿದೆ. ಆದರೆ, ಸದ್ಯಕ್ಕೆ ರೋಮಿಂಗ್ ಮುಕ್ತ ಸೇವೆ ಜಾರಿಗೊಳಿಸುವುದಿಲ್ಲ ಎಂದೂ ಟ್ರಾಯ್ ಹೇಳಿದೆ. ನೂತನ ದರ: 2007ರಲ್ಲಿ ಟ್ರಾಯ್ ಸ್ಥಳೀಯ ರೋಮಿಂಗ್ ಕರೆಗಳಿಗೆ ಪ್ರತಿ ನಿಮಿಷಕ್ಕೆ 1.40, ಎಸ್ಟಿಡಿ ಕರೆಗಳಿಗೆ 2...
Comments
Post a Comment