Posts

ಇಫ್ತಾರ್ ಕೂಟದಲ್ಲಿ ಕ್ಯಾಪ್ ಹಾಕಿಕೊಂಡವರೆಲ್ಲಾ ಮುಸಲ್ಮಾನರಿಗೆ ಹಾಕಿದ್ದೂ ಟೋಪಿಯನ್ನೇ ಮಿಸ್ಟರ್ ನಿತೀಶ್‌ಕುಮಾರ್!

Image
- ಪ್ರತಾಪ್ ಸಿಂಹ ಬೆತ್ತಲೆ ಪ್ರಪಂಚ ಟೋಪಿ ಔರ್ ತಿಲಕ್! ಕಳೆದ ಏಪ್ರಿಲ್‌ನಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ದಾಮೋದರದಾಸ್ ಮೋದಿಯವರನ್ನು ಪರೋಕ್ಷವಾಗಿ ಕುಟುಕುತ್ತಾ, "ಕಭಿ ಟೋಪಿ ಭಿ ಪಹನ್ನಾ ಪಡ್ತಾ ಹೈ, ಕಭಿ ಟಿಕಾ ಭಿ ಲಗಾನಾ ಪಡ್ತಾ ಹೈ", ಅಂದರೆ ಕೆಲವೊಮ್ಮೆ ಟೋಪಿಯನ್ನೂ(ಮುಸಲ್ಮಾನರ) ಹಾಕಬೇಕಾಗುತ್ತದೆ, ತಿಲಕವನ್ನೂ(ಹಿಂದುಗಳ) ಇಟ್ಟುಕೊಳ್ಳಬೇಕಾಗುತ್ತದೆ ಎಂದಾಗಲೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರರ ನಿಜ ಬಣ್ಣ, ಉದ್ದೇಶ ಬಯಲಾಗಿತ್ತು. ಮುಂದುವರೆದು, "ಕೇವಲ್ ಹವಾ ಬನಾನೆ ಸೆ ಕುಛ್ ನಹೀ ಹೋಗಾ" ಎಂದಾಗಲಂತೂ ಅವರು ನರೇಂದ್ರ ಮೋದಿಯವರ ಬಗ್ಗೆ ಮತ್ಸರ ಹೊಂದಿದ್ದಾರೆ  ಮಾತ್ರವಲ್ಲ, ಸ್ವತಃ ಪ್ರಧಾನಿಯಾಗ ಬೇಕೇಂಬ ಮಹತ್ವಾಕಾಂಕ್ಷೆಯನ್ನೂ ಹೊಂದಿದ್ದಾರೆ ಎಂಬುದೂ ಸ್ಪಷ್ಟವಾಗಿ ಗೋಚರಿಸಿತ್ತು. ಹೀಗಾಗಿ... ಗೋವಾದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ನರೇಂದ್ರ ಮೋದಿಯವರನ್ನು ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಿದಾಗ, "ಅದು ಬಿಜೆಪಿಯ ಆಂತರಿಕ ವಿಚಾರ" ಎಂದು ಪ್ರಾರಂಭದಲ್ಲಿ ಹೇಳಿದ್ದ ಜೆಡಿಯು, ಆಡ್ವಾಣಿ ಪ್ರಹಸನ ಹಾಗೂ ಕುಮ್ಮಕ್ಕಿನ ನಂತರ ಮತ್ತೆ ಮೋದಿ ವಿಚಾರದಲ್ಲಿ ತಗಾದೆ ತೆಗೆದು 17 ವರ್ಷಗಳ ಮೈತ್ರಿಯನ್ನೇ ಮುರಿದು ಹೊರ ನಡೆದಿದೆ. ಆದರೆ ಈ ನಿತೀಶ್‌ಕುಮಾರರ ಮಾತು ನಡತೆಗಳ ಹಿಂದಿನ ಉದ್ದೇಶ, ಅರ್ಥವಾದರೂ ಏನು? 2003ರಲ್ಲಿ ಗುಜರಾತ್ ಮುಖ್ಯಮಂತ್ರಿಯನ್...

ಪೇಸ್‌ಗೆ ನಲವತ್ತು, ಇದು ಕೃತಜ್ಞತೆ ಅರ್ಪಿಸುವ ಹೊತ್ತು!

Image
ಬೆತ್ತಲೆ ಪ್ರಪಂಚ - ಪ್ರತಾಪ್ ಸಿಂಹ ಲಿಯಾಂಡರ್ ಪೇಸ್ ಇದ್ದ ಒಬ್ಬ ಮಗನನ್ನೂ ಮೃತ್ಯು ಕಿತ್ತುಕೊಳ್ಳುವ ಭಯ, ಆತಂಕ ಮುಖ, ಮನಸ್ಸು ಎಲ್ಲವನ್ನೂ ಆವರಿಸಿದೆ. ಅಂತಹ ಸ್ಥಿತಿಯಲ್ಲಿ ಡಾ. ವೆಸ್ ಪೇಸ್ ಮುಂಬೈ ವಿಮಾನ ನಿಲ್ದಾಣದಲ್ಲಿ ನಿಂತಿದ್ದಾರೆ. ಅಷ್ಟರಲ್ಲಿ ಪರಿಚಿತವಲ್ಲದ ನಂಬರೊಂದರಿಂದ ಅವರ ಮೊಬೈಲ್‌ಗೆ ಮೆಸೇಜ್ ಬಂತು- "ಬಾಂಬೆ ಹಾಸ್ಪಿಟಲ್‌ನ ಡಾ. ಭೀಮ್‌ಸಿಂಘಾಲ್‌ರನ್ನು ಕೂಡಲೇ ಸಂಪರ್ಕಿಸಿ". ಆ ಸಂದೇಶವನ್ನು ಕಳುಹಿಸಿದ್ದವರು ಉದ್ಯಮಿ ಪಾರ್ಥಿವ್ ಕಿಲಾಚಂದ್. ಅವರ ಪತ್ನಿಯ ಮೆದುಳಿನಲ್ಲಿ ಗಡ್ಡೆಯೊಂದು ಬೆಳೆದಿತ್ತು. ಶಸ್ತ್ರಚಿಕಿತ್ಸೆಗಾಗಿ ನ್ಯೂಯಾರ್ಕ್‌ಗೆ ಹೋದರೂ ಫಲಕಾರಿಯಾಗದೆ ವಾಪಸ್ ಬಂದಿದ್ದರು. ಹೀಗೆ ಯಾವುದೇ ದಾರಿ ಕಾಣದೆ ಕೈಚೆಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಡಾ. ಭೀಮ್ ಸಿಂಘಾಲ್ ಮುಂಬೈನಲ್ಲೇ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ, ಗುಣಪಡಿಸಿದ್ದರು. ಹೌದು, ಡಾ. ವೆಸ್ ಪೇಸ್ ಮಗನ ಮೆದುಳಿನಲ್ಲಿ ಕೂಡ ಗಡ್ಡೆ ಬೆಳೆದಿತ್ತು. ಆತ 'ಸಿನ್‌ಸಿನಾಟಿ ಮಾಸ್ಟರ್ಸ್‌' ಟೆನಿಸ್ ಟೂರ್ನಿಯಲ್ಲಿ ಆಟವಾಡುತ್ತಿದ್ದಾಗ ಮೈದಾನದಲ್ಲೇ ಕುಸಿದಿದ್ದ, ತೀವ್ರತಲೆನೋವು, ತಲೆಸುತ್ತು, ಸುಸ್ತು ಕಾಣಿಸಿಕೊಂಡಿದ್ದರಿಂದ ಅಮೆರಿಕದ ಆರ್ಲ್ಯಾಂಡೋದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದು ಕ್ಯಾನ್ಸರ್ ಗಡ್ಡೆಯಿರಬಹುದು ಎಂದು ಸಂಶಯಪಡಲಾಗಿತ್ತು. ಬದುಕುಳಿಯುವ ಸಾಧ್ಯತೆ ಬಗ್ಗೆ ಅನುಮಾನಗಳು ಆರಂಭವಾಗಿದ್ದವು. ಅಂದಹಾಗೆ ಡಾ. ವೆಸ...

ಮೊಬೈಲ್ ರೋಮಿಂಗ್ ದರ ಇಳಿಕೆ

  ಮೊಬೈಲ್ ಬಳಕೆದಾರರಿಗೊಂದು ಸಿಹಿ ಸುದ್ದಿ! ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಸೋಮವಾರ ಮೊಬೈಲ್ ಕರೆ ಹಾಗೂ ಎಸ್‌ಎಂಎಸ್‌ಗಳ ಮೇಲಿನ ರೋಮಿಂಗ್ ದರವನ್ನು ಕಡಿತಗೊಳಿಸಿದೆ. ಈ ನೂತನ ದರ ಜು.1ರಿಂದ ಜಾರಿಗೆ ಬರಲಿದೆ. ಇದಲ್ಲದೆ ಎಸ್‌ಟಿವಿ(ಸ್ಪೆಷಲ್ ಟ್ಯಾರಿಫ್ ವೋಚರ್ಸ್) ಮತ್ತು ಕಾಂಬೋ ವೊಚರ್ಸ್ ಎನ್ನುವ ಎರಡು ರೀತಿಯ ಯೋಜನೆಗಳನ್ನು ಗ್ರಾಹಕರಿಗೆ ನೀಡುವಂತೆ ಟ್ರಾಯ್ ಮೊಬೈಲ್ ಸೇವಾದಾರರಿಗೆ ಸೂಚಿಸಿದೆ. ಈ ಷರತ್ತುಬದ್ಧ ಮುಕ್ತ ರೋಮಿಂಗ್ ಯೋಜನೆಗಳು ಮೊಬೈಲ್ ರೋಮಿಂಗ್ ದರವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ನೆರವು ನೀಡಲಿದೆ. ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಳದಿಂದಾಗಿ ರಾಷ್ಟ್ರೀಯ ರೋಮಿಂಗ್‌ಗೆ ಸಂಬಂಧಿಸಿದ ವೆಚ್ಚ ಇಳಿಕೆಯಾಗಿದೆ. ಆದರೆ, ರೋಮಿಂಗ್‌ಗಾಗಿ ಸದ್ಯ ಮೊಬೈಲ್ ಸೇವಾದಾರರು ಒಂದಷ್ಟು ವೆಚ್ಚ ಮಾಡಲೇ ಬೇಕಿದೆ. ಹಾಗಾಗಿ ಸದ್ಯದ ಸ್ಥಿತಿಯಲ್ಲಿ ಮುಕ್ತ ರೋಮಿಂಗ್ ಸೌಲಭ್ಯ ಕಲ್ಪಿಸುವುದು ಕಾರ್ಯಸಾಧುವಲ್ಲ. ಒಂದು ವೇಳೆ ಮುಕ್ತ ರೋಮಿಂಗ್ ಸೇವೆ ಜಾರಿಗೊಳಿಸಿದರೆ ಆಗುವ ನಷ್ಟವನ್ನು ಮೊಬೈಲ್ ಸೇವಾದಾರರು ಗ್ರಾಹಕರ ಮೇಲೆ ಹೇರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಟ್ರಾಯ್ ಸದ್ಯ ದರ ಕಡಿತಗೊಳಿಸುವ ನಿರ್ಧಾರವನ್ನಷ್ಟೇ ಪ್ರಕಟಿಸಿದೆ. ಆದರೆ, ಸದ್ಯಕ್ಕೆ ರೋಮಿಂಗ್ ಮುಕ್ತ ಸೇವೆ ಜಾರಿಗೊಳಿಸುವುದಿಲ್ಲ ಎಂದೂ ಟ್ರಾಯ್ ಹೇಳಿದೆ. ನೂತನ ದರ: 2007ರಲ್ಲಿ ಟ್ರಾಯ್ ಸ್ಥಳೀಯ ರೋಮಿಂಗ್ ಕರೆಗಳಿಗೆ ಪ್ರತಿ ನಿಮಿಷಕ್ಕೆ 1.40, ಎಸ್‌ಟಿಡಿ ಕರೆಗಳಿಗೆ 2...

ಭೂಕುಸಿತದಿಂದ ಸಿಕ್ಕಿಹಾಕಿಕೊಂಡ ಹಿಮಾಚಲ ಸಿಎಂ ವೀರಭದ್ರ ಸಿಂಗ್

Image
 ಉತ್ತರ ಭಾರತದಾದ್ಯಂತ ಭಾರಿ ಮಳೆಯಾಗುತ್ತಿದೆ. ಅವಧಿಗಿಂತ ಮುಂಚಿತವಾಗಿಯೇ ಕಾಲಿಟ್ಟಿರುವ ಕುಂಭ-ದ್ರೋಣ ಮಳೆಗೆ ಕನಿಷ್ಠ 60 ಮಂದಿ ಅಸುನೀಗಿದ್ದು, ಇತರ 60 ಮಂದಿ ನಾಪತ್ತೆಯಾಗಿದ್ದಾರೆ. ಉತ್ತರಾಖಂಡ, ಪಂಜಾಬ್, ಹಿಮಾಚಲ ಪ್ರದೇಶಗಳಲ್ಲಿ ಮಳೆಯಿಂದಾಗಿ ವ್ಯಾಪಕ ಹಾನಿ ಉಂಟಾಗಿದೆ. ಹಿಮಾಚಲ ಮುಖ್ಯಮಂತ್ರಿ ವೀರಭದ್ರ ಸಿಂಗ್ ಪ್ರವಾಹದಿಂದಾಗಿ ಕಿನೌರ್ ಜಿಲ್ಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಜತೆಗೆ ತೀರ್ಥಕ್ಷೇತ್ರಗಳಾದ ಉತ್ತರ ಕಾಶಿ, ರುದ್ರಪ್ರಯಾಗ, ಕೇದಾರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ 24 ಸಾವಿರ ಮಂದಿ ತೀರ್ಥಯಾತ್ರಿಗಳು ಮಾರ್ಗ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಭಾರಿ ಮಳೆಯಿಂದಾಗಿ ವಾರ್ಷಿಕ ಕೈಲಾಸ್ ಮಾನಸ ಸರೋವರ ಯಾತ್ರೆ ರದ್ದುಗೊಳಿಸಲಾಗಿದೆ. ಕೊಚ್ಚಿಹೋದ 200 ವಾಹನ: ಉತ್ತರಾಖಂಡದಲ್ಲಿ ಈ ಬಾರಿಯ ಬಿರು ಮಳೆಗೆ ವ್ಯಾಪಕ ಹಾನಿ ಸಂಭವಿಸಿದೆ. ಅಲಕಾನಂದ ನದಿಯಲ್ಲಿನ ಪ್ರವಾಹಕ್ಕೆ 200 ವಾಹನಗಳು ಕೊಚ್ಚಿ ಹೋಗಿವೆ. ಚಮೋಲಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಮಳೆ ಸಂಬಂಧಿ ದುರಂತಗಳಲ್ಲಿ 50 ಮಂದಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಹಿಂದೂಗಳ ಪವಿತ್ರ ಯಾತ್ರಾ ಸ್ಥಳಗಳಾಗಿರುವ  ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರೀನಾಥ್‌ಗಳಿಗೆ ತೆರಳುವ ಪ್ರಮುಖ ರಸ್ತೆಗಳಲ್ಲಿ ಭೂಕುಸಿತ ಸಂಭವಿಸಿದೆ. ಹೀಗಾಗಿ, ಯಾತ್ರಾರ್ಥಿಗಳು ಅಲ್ಲಲ್ಲೇ ಸಿಕ್ಕಿ ಹಾಕಿಕೊಂಡಿದ್ದಾರೆ. ಸುಮಾರು 24 ಸಾವಿರ...

`ಮೋದಿ ಮುಸ್ಲಿಂ ವಿರೋಧಿ’ ಎಂಬ ಅಪಪ್ರಚಾರ ಅದೆಷ್ಟು ಸತ್ಯ?

Image
ಮೋದಿಯವರನ್ನು ಬಿಜೆಪಿಯ ಕೆಲವರೂ ಸೇರಿದಂತೆ ಅನೇಕರು ವಿರೋಧಿಸುತ್ತಿದ್ದಾರೆಂದರೆ ಅವರೊಳಗೆ ಯಾವುದೋ ಭೀತಿ ಮನೆ ಮಾಡಿರಲೇಬೇಕು. ತಮ್ಮ ಸ್ವಾರ್ಥಿ ರಾಜಕಾರಣಕ್ಕೆ, ಸುಳ್ಳುಸೆಟೆಗಳಿಗೆ, ನಾನಾ ಬಗೆಯ ಅಪಸವ್ಯಗಳಿಗೆ ಮೋದಿ ಆಡಳಿತ ಪೂರ್ಣ ವಿರಾಮ ಹಾಕಬಹುದೆಂಬುದೇ ಆ ಭೀತಿ! ಕತ್ತಲೆಯನ್ನೇ ಇಷ್ಟಪಡುವ ಖದೀಮರು ಬೆಳಕನ್ನು ಖಂಡಿತ ಬಯಸಲಾರರು. ಅದರಲ್ಲೂ ಕಣ್ಣು ಚುಚ್ಚುವ ಪ್ರಖರ ಬೆಳಕು ನೋಡಿದೊಡನೆ ಅವರಿಗೆ ಜಂಘಾಬಲವೇ ಉಡುಗಿ ಹೋಗುವುದು ಸ್ವಾಭಾವಿಕ! ನರೇಂದ್ರ ಮೋದಿಯವರ ರಾಜಕೀಯ ವಿರೋಧಿಗಳ ಸಂಖ್ಯೆ ದಿನೇದಿನೇ ಏರತೊಡಗಿದೆಯೆ? ಗೋವಾದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮೋದಿಯವರನ್ನು ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಘೋಷಿಸಿದ ಬಳಿಕ ಈ ಪ್ರಶ್ನೆಗೆ ಇನ್ನಷ್ಟು ಮಹತ್ವ ಬಂದಿದೆ. ಮೋದಿಯವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಘೋಷಿಸಲಾಗುವುದೆಂಬ ವದಂತಿ ಕಾರ್ಯಕಾರಿಣಿ ಸಭೆಗೆ ಮುನ್ನವೇ ಎಲ್ಲೆಡೆ ಹರಡಿತ್ತು. ಮಾಧ್ಯಮಗಳಲ್ಲಿ ಈ ಕುರಿತು ವರದಿಯೂ ಪ್ರಕಟವಾಗಿತ್ತು. ಇದೇ ಹಿನ್ನೆಲೆಯಲ್ಲಿ ಬಿಜೆಪಿಯ ಹಿರಿಯ ಧುರೀಣ, ಮೋದಿಯವರನ್ನು ರಾಷ್ಟ್ರಮಟ್ಟದಲ್ಲಿ ಬೆಳೆಸಿದ ಬಿಜೆಪಿಯ ಭೀಷ್ಮ ಎಲ್.ಕೆ.ಆಡ್ವಾಣಿ ಗೋವಾ ಸಭೆಗೆ ಗೈರು ಹಾಜರಾಗಿದ್ದುದು ಬಿಜೆಪಿಯಲ್ಲಷ್ಟೇ ಅಲ್ಲ, ರಾಷ್ಟ್ರಮಟ್ಟದ ರಾಜಕೀಯದಲ್ಲೂ ಸಂಚಲನ ಮೂಡಿಸಿತ್ತು. ಆಡ್ವಾಣಿ ಗೈರು ಹಾಜರಿಗೆ ಹೊಟ್ಟೆ ನೋವು ಕಾರಣವೆಂದು ಹೇಳಲಾಯಿತಾದರೂ ಅದು ಹೊಟ್ಟೆ ನೋವಲ್ಲ, ಮೋದಿಯ...

ABVP Mangalore

Image

ಹುಡುಗಿಯರೇ ಹುಷಾರ್! ಅದು ‘ಲವ್’ ಅಲ್ಲ, ಜಿಹಾದ್’!!

ಹಿಂದೂ ಯುವತಿಯರ ಮನಸ್ಸನ್ನು ಕೆಡಿಸಿ ಪ್ರೀತಿಯ ನಾಟಕವಾಡಿ ಅವರನ್ನು ಹಿಂದೂಗಳ ವಿರುದ್ಧವೇ ಛೋ ಬಿಡುವ ಮುಸ್ಲಿಂ ಜಿಹಾದಿಗಳ ವಿರುದ್ಧ ಹೆಚ್ಚರಗೊಳ್ಳೋಣ....... ಜಾಗೃತರಾಗೋಣ......... ಇಂದು ಸ್ವಪ್ನಾ..... ನಾಳೆ.........?????????? ದಯಾವಿಟ್ಟು ಶೇರ್ ಮಾಡಿ.  ಪ್ರತಾಪ್ ಸಿಂಹ ರವರ ಲೇಖನ ಇಲ್ಲಿ ಪ್ರಸ್ತುತವಾಗಿ ಕಂಡು ಬರುವ ಕಾರಣ ಪ್ರಕಟಿಸಗಾಗಿದೆ... ಆ ಪ್ರಕರಣಗಳು ಹೇಗಿವೆಯೆಂದರೆ ಹೈಕೋರ್ಟ್ ಕೂಡ ತಲೆಕೆಡಿಸಿಕೊಂಡಿದೆ! “ಲವ್ ಜಿಹಾದ್” ಅಥವಾ “ರೋಮಿಯೋ ಜಿಹಾದ್” ಎಂಬ ಕಾರ್ಯಸೂಚಿ ನಿಜಕ್ಕೂ ನಡೆ ಯುತ್ತಿದೆಯೇ? ಹೌದೆಂದಾದರೆ ಅದರ ಉದ್ದೇಶ ಹಾಗೂ ಯೋಜನೆಗಳೇನು? ಆ ಕಾರ್ಯದಲ್ಲಿ ಯಾವ ಯಾವ ಸಂಘಟನೆಗಳು ಭಾಗಿಯಾಗಿವೆ? ಅಂತಹ ಚಟುವಟಿಕೆಗಳಿಗೆ ಎಲ್ಲಿಂದ ಹಣ ಬರುತ್ತಿದೆ? ಕಳೆದ ಮೂರು ವರ್ಷಗಳಲ್ಲಿ ಶಾಲೆ, ಕಾಲೇಜುಗಳ ಎಷ್ಟು ವಿದ್ಯಾರ್ಥಿಗಳು ಹಾಗೂ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ? ಈ ಆರೋಪಿತ ಯೋಜನೆ ರಾಷ್ಟ್ರವ್ಯಾಪಿಯಾಗಿ ನಡೆಯುತ್ತಿದೆಯೇ? ಅದಕ್ಕೆ ವಿದೇಶಗಳಿಂದ ಹಣ ಹರಿದು ಬರುತ್ತಿದೆಯೇ? “ಲವ್ ಜಿಹಾದ್”ಗೂ ನಕಲಿ ನೋಟು, ಮಾದಕವಸ್ತು ಕಳ್ಳಸಾಗಣೆ ಜಾಲ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೂ ಸಂಬಂಧ, ಸಂಪರ್ಕ ಇದೆಯೇ? ಹಾಗಂತ ಕೇರಳ ಹೈಕೋರ್ಟ್ ಪ್ರಶ್ನಿಸಿದೆ! ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ 2009, ಸೆಪ್ಟೆಂಬರ್ 30ರಂದು ನಿರ್ದೇಶನ ನೀಡಿರುವ ಕೇರಳ ಹೈಕೋರ್ಟ್, ಕೂಲಂಕಷ ತನಿಖೆ ನಡೆಸಿ, ಈ ಮೇಲಿನ ಆಯಾಮಗಳ ಬಗ್ಗೆ ದೃಷ...